ಭಾರತದ ಪ್ರಸಿದ್ಧ ಮಾಡೆಲ್ ಆಗಿರುವ, ರಿಯ ಪಿಳ್ಳೆ ೧೯೯೮ ರಲ್ಲಿ ಒಬ್ಬ ಮುಖ್ಯ ಬಾಲಿವುಡ್ ನಟ ಸಂಜಯ್ ದತ್ ರನ್ನು ಮದುವೆಯಾದರು. ಆ ಮದುವೆ ಹೆಚ್ಚು ಸಮಯ ಉಳಿಯದೆ, ೨೦೦೫ ರಲ್ಲಿ ಅವರಿಬ್ಬರೂ ಬೇರೆಯಾದರು. ರಿಯಾ ಈಗ ಮದುಯಾಗಿರುವುದು, ಭಾರತದ ಸುಪ್ರಸಿದ್ಧ ಯಶಸ್ವಿ ಟೆನ್ನಿಸ್ ತಾರೆ, ಲಿಯಾಂಡರ್ ಪೇಸ್ ರವರನ್ನು. ಈ ದಂಪತಿಗಳಿಗೆ ಒಬ್ಬ ಮಗಳು, ಆಯಿನಾ ಇದ್ದಾಳೆ. ರಿಯ ಪಿಳ್ಳೆ ಯವರ ತಾತ, ಮಹಾರಾಜ್ ನರ್ಸಿಂಗಿರ್ ಧನರಾಜ್ ಗಿರ್, ಗ್ಯಾನ್ ಬಹಾದುರ್ ಹೈದರಾಬಾದ್ ಮತ್ತು ತಾಯಿ ಮೂಕಿಚಿತ್ರದ ಕಾಲದ ಅಭಿನೇತ್ರಿ, ಝುಬೇದ. ಭಾರತದ ಪ್ರಪ್ರಥಮ ಟಾಕಿ ಚಿತ್ರ, ಆಲಮ್ ಆರಾದಲ್ಲಿ (೧೯೩೧) ನಟಿಸಿದ್ದರು. == ರಿಯ ಪಿಳ್ಳೆ ವರ್ಷದ ಮಹಿಳೆ ಪ್ರಶಸ್ತಿ ಯನ್ನು ಪಡೆದರು == ೨೦೦೩ ರಲ್ಲಿ 'ವರ್ಷದ ಮಹಿಳೆ ಪ್ರಶಸ್ತಿ' ಯನ್ನು ಪಡೆದರು. "( )" ಇದನ್ನು ಪಡೆದ ಇನ್ನಿತರ ಮಹಿಳೆಯರು, ರವೀನಾ ಟಂಡನ್, ಅನುಷ್ಕಾ ಶಂಕರ್, ಮತ್ತು ರಿತು ಬೆರಿ, ಅಂತಾರಾಷ್ಟ್ರೀಯ ವರ್ಷದ ಸಮಾರಂಭದಲ್ಲಿ ಪ್ರದಾನಮಾಡಲಾಯಿತು. ಈ ಪ್ರಶಸ್ತಿಯನ್ನು ಪ್ರಮೋಟ್ ಮಾಡಿದ, ಇಂಡಿಯ ಟೈಮ್ಸ್, ಆಸ್ಮಿ ಡೈಮಂಡ್ಸ್, ಮತ್ತು ಇಂಡಿಯನ್ ಟೆಲಿವಿಶನ್ ಅಕಾಡೆಮಿ, 'ಸಾರ್ವಜನಿಕ ಸೇವೆ'ಯನ್ನು ಗುರುತಿಸಿ, 'ರಿಯಾ ಪಿಳ್ಳೆ'ಯವರಿಗೆ ಕೊಡಲಾಯಿತು. == 'ರಿಯ ಪಿಳ್ಳೆ,' 'ಆರ್ಟ್ ಆಫ್ ಲಿವಿಂಗ್ ಸಂಸ್ಥೆ'ಯಲ್ಲಿ ಮೇಲ್ವಿಚಾರಕಿಯಾಗಿದ್ದಾರೆ == 'ರಿಯ ಪಿಳ್ಳೆ' ಯವರು ತಮ್ಮ ಸೇವಾ ಕಾರ್ಯವನ್ನು ಶ್ರೀ. ಶ್ರೀ. ರವಿಶಂಕರ್ ಗುರೂಜಿಯವರ, ಆರ್ಟ್ ಆಫ್ ಲಿವಿಂಗ್ ಫೌಂಡೇಶನ್ ಸಂಸ್ಥೆ ಗೆ, ಸಮರ್ಪಿಸಿಕೊಂಡಿದ್ದಾರೆ. 'ಆರ್ಟ್ ಆಫ್ ಲಿವಿಂಗ್ ಸಂಸ್ಥೆ'ಯಲ್ಲಿ ಮೇಲ್ವಿಚಾರಕಿಯಾಗಿ ಕೆಲಸಮಾಡುತ್ತಿದ್ದಾರೆ. == == ^ , , 29, 2006 ^ , , 31, 2007 ^ » GR8! 2003 . .